
ದಕ್ಷಿಣ ಕನ್ನಡ ಜಿಲ್ಲಾ ಕಿಸಾನ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಸನತ್ ಮುಳುಗಾಡು ಅಯ್ಕೆಯಾಗಿದ್ದಾರೆ. ಕಾನೂನು ಪದವೀಧರರಾಗಿ, ಪ್ರಗತಿಪರ ಕೃಷಿಕರಾಗಿ, ಕುಕ್ಕುಟೋದ್ಯಮಿಯಾಗಿರುವ ಇವರು ಗುತ್ತಿಗಾರು ಗ್ರಾ.ಪಂ.ಸದಸ್ಯರಾಗಿ, ಉಪಾಧ್ಯಕ್ಷರಾಗಿ ಗ್ರಾಮಾಭಿವೃದ್ದಿಗೆ ದುಡಿದಿದ್ದಾರೆ. ಮಿತ್ರಬಳಗ ವಳಲಂಬೆ ಇದರ ಅಧ್ಯಕ್ಷರಾಗಿ, ಜಿಲ್ಲಾ ಕುಕ್ಕುಟ ಬೆಳೆಗಾರರ ಒಕ್ಕೂಟದ ಅಧ್ಯಕ್ಷರಾಗಿ, ಲಯನ್ಸ್ ಸದಸ್ಯರಾಗಿ, ಗೌಡ ಸಂಘದ ತಾಲೂಕು ನಿರ್ದೇಶಕ ರಾಗಿ, ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ತಂದೆ ದಿ. ಗಂಗಯ್ಯ ಗೌಡ ಮುಳುಗಾಡು ಸುಳ್ಯ ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಪ್ರಭಾವಿತರಾಗಿದ್ದರು.