Ad Widget

ಅಕ್ರಮ ದನ ಸಾಗಾಟ ಪಿಕಪ್ ವಾಹನದೊಂದಿಗೆ ಮೂವರು ಪೊಲೀಸರ ವಶಕ್ಕೆ


ಸುಳ್ಯದ ನಾವೂರು ಎಂಬಲ್ಲಿಂದ ಎರಡು ದನ ಹಾಗೂ ಒಂದು ಹೋರಿಯನ್ನು ಪಿಕಪ್ ವಾಹನದಲ್ಲಿ ದುಗಲಡ್ಕ ಮಾರ್ಗವಾಗಿ ಕಡಬಕ್ಕೆ ಜೂನ್ 15ರಂದು ಸಂಜೆ ವೇಳೆ ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ವಿಷಯದ ಖಚಿತ ಮಾಹಿತಿ ತಿಳಿದ ದುಗಲಡ್ಕ ಪರಿಸರದ ಯುವಕರು ವಾಹನವನ್ನು ತಡೆದು ಪಿಕಪ್ ನಲ್ಲಿದ್ದ ಮೂವರನ್ನು ವಿಚಾರಿಸಿ ಥಳಿಸಿದರೆನ್ನಲಾಗಿದೆ. ವಿಷಯ ತಿಳಿದು ಸುಳ್ಯ ಪೋಲಿಸರು ಸ್ಥಳಕ್ಕೆ ಧಾವಿಸಿ ದನ ಸಹಿತ ಪಿಕಪ್ ವಾಹನ ಮತ್ತು ದನ ಸಾಗಿಸುತ್ತಿದ್ದ ಮೂವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಹೋದರೆಂದು ತಿಳಿದುಬಂದಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!