Ad Widget

ಮಾಯವಾಗುತ್ತಿದೆ ಬಿಎಸ್ಎನ್ಎಲ್ 3 ಜಿ ಇಂಟರ್ನೆಟ್ – ಈಗ ನಡೆಯುತ್ತಿದೆ ಕಣ್ಣುಮುಚ್ಚಾಲೆ ಆಟ

ಬರಹ *ಭಾಸ್ಕರ ಜೋಗಿಬೆಟ್ಟು*

. . . . .

ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಉತ್ತಮ ನೆಟ್ವರ್ಕ್ ಸೇವೆ ಒದಗಿಸುವ ಏಕೈಕ ಸರಕಾರಿ ಮೊಬೈಲ್ ನೆಟ್ವರ್ಕ್ ಕಂಪನಿ ಬಿಎಸ್ಎನ್ಎಲ್ . ಆದರೆ ನಂಬಿದ ಜನರಿಗೆ ಇಂದು ನಿರಾಸೆ ಆಗುವ ಸಂದರ್ಭ ಬರುತ್ತಿದೆ..!!

ಇದು ಯಾವುದೋ ದೂರದ ಊರಿನ ಕಥೆಯಲ್ಲ, ಬದಲಾಗಿ ನಮ್ಮ ಕಲ್ಮಡ್ಕದ ಜನತೆ ಪ್ರತಿವರ್ಷ ಅನುಭವಿಸುವ ನರಕಯಾತನೆಯ ಕಥೆ… ಅದೊಂದು ಕಾಲದಲ್ಲಿ ಈ ಗ್ರಾಮೀಣ ಪ್ರದೇಶದಲ್ಲಿ ಬಿಎಸ್ಎನ್ಎಲ್ ನೆಟ್ವರ್ಕ್ ಬಿಟ್ಟರೆ ಬೇರೆ ಯಾವುದೇ ನೆಟ್ವರ್ಕ್ ಇರಲಿಲ್ಲ. ಆದರೆ ಕಳೆದ ವರ್ಷದಿಂದ ಜಿಯೊ ನೆಟ್ವರ್ಕ್ ಅಳವಡಿಸಲಾಗಿದೆ. ಜಿಯೊ ನೆಟ್ವರ್ಕ್ ಅಳವಡಿಸಿದ ನಂತರ ಕಲ್ಮಡ್ಕ ಗ್ರಾಮದ ಜನರ ಭಾರಿ ದೊಡ್ಡ ಸಮಸ್ಯೆಯೊಂದು ಪರಿಹಾರ ಆದಂತಾಗಿದೆ. ಯಾಕೆಂದರೆ ಸರಿಯಾಗಿ ಕೆಲಸ ಮಾಡದ ಬಿಎಸ್ಎನ್ಎಲ್ ಮೊಬೈಲ್ ನೆಟ್ವರ್ಕ್ ಕಂಪನಿಯನ್ನು ನಂಬಿದ ಜನರು ರೋಸಿ ಹೋಗಿದ್ದರು. ಸರಿಯಾದ ನೆಟ್ವರ್ಕ್ ಇರುವುದಿಲ್ಲ, ಇಂಟರ್ನೆಟ್ ಸೌಲಭ್ಯ ಸರಿಯಾದ ರೀತಿಯಲ್ಲಿ ಸಿಗುವುದಿಲ್ಲ. ವಿದ್ಯುತ್ ಕಡಿತಗೊಂಡ ತಕ್ಷಣವೆ ಮೊಬೈಲ್ ನೆಟ್ವರ್ಕ್ ಜನರ ಮೊಬೈಲ್ ನಿಂದ ಮಾಯವಾಗುತ್ತದೆ.ಅದರಲ್ಲೂ ಮಳೆಗಾಲ ಆರಂಭವಾದರಂತೂ ಕತೆ ಹೇಳ ತೀರದು. ಕಳೆದ ವರ್ಷ ಈ ಅವ್ಯವಸ್ಥೆಯ ಬಗ್ಗೆ ದೂರು ದಾಖಲಿಸಲಾಗಿತ್ತು ಮತ್ತು ಪತ್ರಿಕೆಗಳಲ್ಲಿ ಕೂಡ ಪ್ರಕಟಿಸಲಾಗಿತ್ತು.  ಆದರೆ ಈ ವರ್ಷ ಕೂಡ ಅದೆ ಸಮಸ್ಯೆ ಪುನರಾವರ್ತನೆ ಆಗಿದೆ. ನಂಬಿದ ಜನರಿಗೆ ಮತ್ತಷ್ಟು ನಿರಾಸೆಯಾಗಿದೆ.

ರೀತಿಯಇಂಟರ್ನೆಟ್ ನಂಬಿದರೆ ಮಕ್ಕಳ ಆನ್ ಲೈನ್ಲಿಕೆ ಸಾಧ್ಯವೆ..?? 

ಕರೋನದಿಂದಾಗಿ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದ್ದು , ಮಕ್ಕಳಿಗೆ ಆನ್ ಲೈನ್ ಮೂಲಕ ಶಿಕ್ಷಣ ಒದಗಿಸುವ ಬಗ್ಗೆ ವ್ಯಾಪಕ ಚರ್ಚೆ ಆರಂಭವಾಗಿದೆ. ನಗರ ಪ್ರದೇಶಗಳಲ್ಲಿ ಉತ್ತಮ ಗುಣಮಟ್ಟದ ಇಂಟರ್ನೆಟ್ ಸೌಲಭ್ಯ ಇರುತ್ತದೆ . ಆದ್ದರಿಂದ ಅಲ್ಲಿ ವಿದ್ಯಾರ್ಥಿಗಳಿಗೆ ಯಾವುದೆ ಸಮಸ್ಯೆಗಳು ಇರುವುದಿಲ್ಲ. ಆದರೆ ಇಂತಹ ಕೆಲಸ ಮಾಡದ ಇಂಟರ್ನೆಟ್ ನ್ನು ನಂಬಿದರೆ ವಿದ್ಯಾರ್ಥಿಗಳ ಕಲಿಕೆ ಹೇಗೆ ಸಾಧ್ಯ..??? ದೇವರೆ ಬಲ್ಲ…!!

ಹೀಗೆ  ಎಸ್ಎನ್ಎಲ್ ಕಂಪನಿ ಕಲಪೆ ಗುಣ ಮಟ್ಟದ ಮೊಬೈಲ್‌ ನೆಟ್ವರ್ಕ್, ಇಂಟರ್ನೆಟ್ ನೀಡಿದರೆ ಜನರು ಉತ್ತಮ ಗುಣಮಟ್ಟದ ನೆಟ್ವರ್ಕ್, ಇಂಟರ್ನೆಟ್ ಸೌಲಭ್ಯ ನೀಡುವ ಖಾಸಗಿ ಕಂಪನಿಗಳಿಗೆ ಪೋರ್ಟೆಬಿಲಿಟಿ ಮಾಡಿಕೊಂಡರೆ ಅಚ್ಚರಿಯಿಲ್ಲ….

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!