- Sunday
- November 24th, 2024
ಕನಕಮಜಲು ಬಳಿ ಇಂಡಿಕಾಕಾರು ಮತ್ತು ಬೈಕ್ ಪರಸ್ಪರ ಡಿಕ್ಕಿಯಾಗಿ ಬೈಕ್ ಸವಾರ ತೀವ್ರ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ಸುಳ್ಯ ಕಡೆಯಿಂದ ಮಂಗಳೂರಿಗೆ ಹೋಗುತ್ತಿದ್ದ ಕಾರು ಪುತ್ತೂರು ಕಡೆಯಿಂದ ಕನಕಮಜಲು ಬರುತ್ತಿದ್ದ ಬೈಕ್ ಇದಾಗಿದ್ದು ಸ್ಥಳೀಯರು ಬೈಕು ಸವಾರರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬೈಕ್ ಸವಾರ ಸ್ಥಳೀಯ ಕನಕಮಜಲು ನಿವಾಸಿಯಾಗಿದ್ದಾರೆ ಎಂದು ತಿಳಿದು ಬಂದಿದೆ .
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ 30 ಕೊರೊನಾ ಪಾಟಿಸಿವ್ ವರದಿಯಾಗಿದೆ. ಇವರಲ್ಲಿ 25 ಮಂದಿ ಗಲ್ಫ್ ನಿಂದ ಬಂದವರಾಗಿದ್ದರೆ, ಉಳಿದ ಐವರು ಮಹಾರಾಷ್ಟ್ರದಿಂದ ಬಂದವರು. ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 271ಕ್ಕೇರಿದೆ. ಉಡುಪಿ ಜಿಲ್ಲೆಯಲ್ಲಿ ಇಂದು 14 ಪ್ರಕರಣಗಳು ವರದಿಯಾಗಿವೆ. ಇವರಲ್ಲಿ ಎಲ್ಲರೂ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1005 ಕ್ಕೇರಿದೆ. ಕರ್ನಾಟಕ...
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಆಶ್ರಯದಲ್ಲಿರುವ ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯನೂತನ ಪ್ರಾಂಶುಪಾಲರಾಗಿ ಕಾಲೇಜಿನಲ್ಲಿ ಆಡಳಿತಾಧಿಕಾರಿಯಾಗಿದ್ದ ಡಾ. ಲೀಲಾಧರ್ ಡಿ.ವಿ ಯವರನ್ನು ಆಡಳಿತ ಮಂಡಳಿ ನೇಮಕಮಾಡಿದ್ದು, ಅಧಿಕಾರ ವಹಿಸಿಕೊಂಡರು. ಪ್ರಾಂಶುಪಾಲ ಪ್ರೊ. ಎನ್.ಎಸ್.ಶೆಟ್ಟರ್‌ರವರ ನಿವೃತ್ತಿಯಿಂದ ತೆರವಾದ ಪ್ರಾಂಶುಪಾಲ ಹುದ್ದೆಗೆ ಡಾ.ಲೀಲಾಧರ್ ಡಿ.ವಿ.ಯವರನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದರವರು ನೇಮಕಗೊಳಿಸಿದ್ದರು....
ಲಾಕ್ ಡೌನ್ ಪ್ರಯುಕ್ತ ನಿಲ್ಲಿಸಿದ್ದ ಸಾಮೂಹಿಕ ಪ್ರಾರ್ಥನೆ ಪುನರಾರಂಭಿಸಲು ಸರ್ಕಾರ ನಿರ್ಬಂಧಗಳನ್ನು ತೆರವು ಗೊಳಿಸಿ ಆಜ್ಞೆ ಹೊರಡಿಸಿದ ಹಿನ್ನೆಲೆಯಲ್ಲಿ ಸಮಸ್ತ ಉಲಮಾ ಒಕ್ಕೂಟದ ಅಧ್ಯಕ್ಷ ಬಹು. ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತು ಕೋಯ ತಂಙಳ್ ಹಾಗೂ ಇಂಡಿಯನ್ ಗ್ರಾಂಡ್ ಮುಫ್ತಿ ಎ.ಪಿ.ಉಸ್ತಾದರ ಮಾರ್ಗದರ್ಶನ ಹಾಗೂ ಉಭಯ ಜಿಲ್ಲೆಗಳ ಖಾಝಿಗಳ ಸೂಚನೆ ಮತ್ತು ಸರಕಾರದ ನಿಯಮಾವಳಿಗಳನ್ನು ಪಾಲಿಸಿಕೊಂಡು...
ಕೊರೊನಾ ಸಂದರ್ಭದಲ್ಲಿ ದೇಶದೆಲ್ಲೆಡೆ ಆರೋಗ್ಯ ಇಲಾಖೆ ಅಧಿಕಾರಿಗಳು ಅಲರ್ಟ್ ಆಗಿದ್ದರು. ಸಾಂಕ್ರಾಮಿಕ ರೋಗದ ನಿಯಂತ್ರಣಕ್ಕಾಗಿ ಆರೋಗ್ಯ ಅಧಿಕಾರಿಗಳನ್ನು ರಜೆ ಇಲ್ಲದೆ ಕಾರ್ಯ ನಿರ್ವಹಿಸುವಂತೆ ಸರಕಾರಗಳು ನಿರ್ದೇಶನ ನೀಡಿದ್ದವು. ಆದರೆ, ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಇರುವ ಆರೋಗ್ಯಧಿಕಾರಿ ಮಾತ್ರ ಲಾಕ್ಡೌನ್ ಅವಧಿಯ ಮೂರು ತಿಂಗಳಲ್ಲಿ ಫೀಲ್ಡಿಗೇ ಇಳಿಯದೆ ಸಂಬಳ ಎಣಿಸುತ್ತಿದ್ದಾರೆ…!ಹೌದು…. ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯಧಿಕಾರಿಯಾಗಿರುವ 70ರ...
ಬರಹ *ಭಾಸ್ಕರ ಜೋಗಿಬೆಟ್ಟು* ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಉತ್ತಮ ನೆಟ್ವರ್ಕ್ ಸೇವೆ ಒದಗಿಸುವ ಏಕೈಕ ಸರಕಾರಿ ಮೊಬೈಲ್ ನೆಟ್ವರ್ಕ್ ಕಂಪನಿ ಬಿಎಸ್ಎನ್ಎಲ್ . ಆದರೆ ನಂಬಿದ ಜನರಿಗೆ ಇಂದು ನಿರಾಸೆ ಆಗುವ ಸಂದರ್ಭ ಬರುತ್ತಿದೆ..!! ಇದು ಯಾವುದೋ ದೂರದ ಊರಿನ ಕಥೆಯಲ್ಲ, ಬದಲಾಗಿ ನಮ್ಮ ಕಲ್ಮಡ್ಕದ ಜನತೆ ಪ್ರತಿವರ್ಷ ಅನುಭವಿಸುವ ನರಕಯಾತನೆಯ ಕಥೆ... ಅದೊಂದು ಕಾಲದಲ್ಲಿ...
ಎಡಮಂಗಲದ ಭರತ್ ಬಿ.ಎಂ.ರವರು ಪುತ್ತೂರು ಪಂಚಾಯತ್ ರಾಜ್ ಇಂಜಿನಿಯರ್ ಉಪವಿಭಾಗದಲ್ಲಿ ಸಹಾಯಕ ಅಭಿಯಂತರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಇದೀಗ ಅವರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾಗಿ ಜೂ .10 ರಂದು ಭಡ್ತಿ ಹೊಂದಿದ್ದಾರೆ . ಇವರು ಎಡಮಂಗಲದ ದಿ.ಡಾ.ಬಿ.ಮೋಹನ ಕುಮಾರ್ ಬಳಕ್ಕಬೆ ಮತ್ತು ಶ್ರೀಮತಿ ಶಶಿಕಲಾ ಮೋಹನ್ ಕುಮಾರ್ ದಂಪತಿಯ...
ರಾಜ್ಯಸಭೆಯ ಚುನಾವಣೆಯಲ್ಲಿ ಬಿಜೆಪಿ ಈರಣ್ಣ ಕಡಾಡಿ, ಅಶೋಕ ಗಸ್ತಿ, ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ಮತ್ತು ಜೆಡಿಎಸ್‌ನ ಎಚ್.ಡಿ.ದೇವೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಾಮಪತ್ರ ಹಿಂದಕ್ಕೆ ಪಡೆಯಲು ಶುಕ್ರವಾರ ಕಡೆಯ ದಿನವಾಗಿತ್ತು. ಬೇರೆ ಯಾರೂ ಕಣದಲ್ಲಿ ಇಲ್ಲದ ಕಾರಣ, ನಾಲ್ವರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪಕ್ಷೇತರೊಬ್ಬರು ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಯಾವುದೇ ಶಾಸಕರು ಸೂಚಕರಾಗಿಲ್ಲದ ಕಾರಣ ತಿರಸ್ಕರಿಸಲಾಗಿದೆ. ಅವಿರೋಧ ಆಯ್ಕೆಯ...
ಸುಳ್ಯದ ಶ್ರೀ ವೆಂಕಟರಮಣ ಸೊಸೈಟಿಯಲ್ಲಿ ವಾರ್ಷಿಕ ಗಣಪತಿ ಹವನ ಹಾಗೂ ಲಕ್ಷ್ಮೀ ಪೂಜೆ ಇಂದು ನಡೆಯಿತು. ಪುರೋಹಿತ ಪ್ರಸನ್ನ ಭಟ್ ಪೂಜಾ ಕೈಂಕರ್ಯ ನೆರವೇರಿಸಿದರು. ಈ ಸಂದರ್ಭದಲ್ಲಿ ಸೊಸೈಟಿ ಅಧ್ಯಕ್ಷ ಪಿ.ಸಿ ಜಯರಾಮ, ಉಪಾಧ್ಯಕ್ಷ ಮೋಹನ್ ರಾಮ್ ಸುಳ್ಳಿ, ನಿರ್ದೇಶಕರಾದ ಚಂದ್ರಾಕೋಲ್ಚಾರ್, ದಿನೇಶ್ ಮಡಪ್ಪಾಡಿ, ಪಿ.ಎಸ್ ಗಂಗಾಧರ, ಹೇಮಚಂದ್ರ ಕದಿಕಡ್ಕ, ಶೈಲೇಶ್ ಅಂಬೆಕಲ್ಲು, ಜಾಕೆ ಸದಾನಂದ,...
Loading posts...
All posts loaded
No more posts