Ad Widget

ಶಿಸ್ತಿನ ಸಿಪಾಯಿಗಳಿಗೆ ಬಿಜೆಪಿ ಹೈ ಕಮಾಂಡ್ ಮಣೆ : ರಾಜ್ಯಸಭೆ ಚುನಾವಣೆಗೆ ಅಚ್ಚರಿಯ ಅಭ್ಯರ್ಥಿ ಆಯ್ಕೆ

ರಾಯಚೂರು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶೋಕ್ ಗಸ್ತಿ ಹಾಗೂ ಬಿಜೆಪಿ ಬೆಳಗಾವಿ ನಗರಾಧ್ಯಕ್ಷ ಈರಣ್ಣ ಕಡಾಡಿ ಇವರನ್ನು ಬಿಜೆಪಿ ಹೈಕಮಾಂಡ್ ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಿದೆ . ಇದರೊಂದಿಗೆ ರಾಜ್ಯ ಬಿಜೆಪಿ ಕಳಿಸಿದ ಲಿಸ್ಟ್ ಗೆ ಹೈಕಮಾಂಡ್ ತಿರಸ್ಕರಿಸಿ , ಪಕ್ಷದ ಕಾರ್ಯಕರ್ತರಿಗೆ ಮಣೆ ಹಾಕಿದೆ.ಈ ಮೂಲಕ ಪಕ್ಷದ ನಾಯಕರ ಹಿಂಬಾಲಕರಿಗೆ, ಪಕ್ಷದಲ್ಲಿ ಗುಂಪುಗಾರಿಕೆ, ಬಂಡಾಯದ ಬಾವುಟ ಹಾರಿಸುವವರಿಗೆ ಸ್ಪಷ್ಟ ಸಂದೇಶ ನೀಡಿದಂತಾಗಿದೆ . ರಾಯಚೂರಿನವರಾದ ಅಶೋಕ್ ಗಸ್ತಿ ಸವಿತಾ ಸಮಾಜಕ್ಕೆ ಸೇರಿದವರು . ಹಾಗೂ ಬೆಳಗಾವಿಯವರಾದ ಈರಣ್ಣ ಕಡಾಡಿ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದಾರೆ . ವಿಶೇಷ ಅಂದರೆ ಇವರಿಬ್ಬರು ಉತ್ತರ ಕರ್ನಾಟಕಕ್ಕೆ ಸೇರಿದವರು .

. . . . . . .

ರಾಜ್ಯಸಭೆಗೆ ನಾಮ ನಿರ್ದೇಶನಗೊಂಡಿರುವ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳ ವಿವರಗಳು

  1. ಅಶೋಕ್ ಗಸ್ತಿ( 55 )
    ವಿದ್ಯಾರ್ಹತೆ : ಬಿಎ . , ಎಲ್ ಎಲ್‌ಬಿ ( ಸ್ಪೆಷಲ್ ) ಊರು : ರಾಯಚೂರು ಜಾತಿ : ಸವಿತಾ ಸಮಾಜ ಮೊಬೈಲ್ : +91 9448695955
    ನಡೆದು ಬಂದ ದಾರಿ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕ್ರರು ಪ್ರಸ್ತುತ ಬಿಜೆಪಿ ಬಳ್ಳಾರಿ ವಿಭಾಗ ಪ್ರಭಾರಿಗಳು , ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ
  1. ಈರಣ್ಣ ಕಡಾಡಿ ( 54 ) ಊರು : ಗೋಕಾಕ್ ತಾಲೂಕು , ಬೆಳಗಾವಿ ಜಿಲ್ಲಾ ಮೊಬೈಲ್ : +91 9448040999 / +91 9483548599
    ಜಾತಿ : ಪಂಚಮಸಾಲಿ ಲಿಂಗಾಯಿತ್ರ ನಡೆದು ಬಂದ ದಾರಿ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯತ್ರರು ಪ್ರಸ್ತುತ ಬಿಜೆಪಿ ಬೆಳಗಾವಿ ವಿಭಾಗ ಪ್ರಭಾರಿಗಳು ಬೆಳಗಾವಿ ಗ್ರಾಮಾಂತರ ಜಿಲ್ಲಾ ಮಾಜಿ ಅಧ್ಯಕ್ಷರು , ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷರು ಕಳೆದ ಮೂರು ದಶಕದಿಂದ ಪಕ್ಷದ ಸಂಘಟನೆ ಹಾಗೂ ಕಾರ್ಯಕರ್ತರಾಗಿ ದುಡಿದವರು .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!