ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರವಾಲ್ ಅವರಿಗೆ ಕೋರೋನಾ ರೋಗದ ಲಕ್ಷಣಗಳು ಕಂಡು ಬಂದಿದ್ದು ಅವರನ್ನು ಪರೀಕ್ಷೆಗೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.
ಅಲ್ಲದೆ ದೆಹಲಿಯ ಮುಖ್ಯಮಂತ್ರಿಯವರು ಈಗಾಗಲೇ ಸ್ವಯಂ ಕ್ವಾರಂಟೈನ್‌ಗೆ ಒಳಪಟ್ಟಿದ್ದಾರೆ . ಭಾನುವಾರದಿಂದ ಜ್ವರದಿಂದ ಮತ್ತು ಕೆಮ್ಮುವಿನಿಂದ ಬಳಲುತ್ತಿರುವ ಅರವಿಂದ್ ಕೇಜ್ರಿವಾಲ್‌ಗೆ ಗಂಟಲು ನೋವು ಸಹ ಕಾಡುತ್ತಿದೆ . ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಕೋವಿಡ್ 19 ಪರೀಕ್ಷೆಯನ್ನು ದಿಲ್ಲಿ ಸಿಎಂ ಅರವಿಂದ್ ಕೇಜಿವಾಲ್‌ಗೆ ಮಂಗಳವಾರದಂದು ಮಾಡಲಾಗುವುದು ಎಂಬುದಾಗಿ ಮಾಹಿತಿ ಲಭಿಸಿದೆ . ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ಕಂಡುಬಂದಿವೆ . ಅರವಿಂದ್ ಕೇಜ್ರಿವಾಲ್‌ಗೆ ಕೊರೊನಾ ವೈರಸ್ ಸೋಂಕು ತಗುಲಿದೆಯೇ ಎಂಬುದರ ಬಗ್ಗೆ ದೊಡ್ಡ ಶಂಕೆ ವ್ಯಕ್ತವಾಗಿದೆ . ಕೋವಿಡ್ ರೋಗಲಕ್ಷಣಗಳಾದ ಜ್ವರ ಹಾಗೂ ಗಂಟಲು ನೋವು ಕಾಣಿಸಿಕೊಂಡಿದೆ . ಹಾಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ .
ಜ್ವರದ ಹಿನ್ನೆಲೆಯಲ್ಲಿ ಭಾನುವಾರ ಮಧ್ಯಾಹ್ನದಿಂದ ನಡೆಯಬೇಕಾಗಿದ್ದ ಅವರ ಎಲ್ಲ ಸಭೆಗಳನ್ನು ರದ್ದುಗೊಳಿಸಲಾಗಿದೆ . ದಿಲ್ಲಿಯಲ್ಲಿ ಇದುವರೆಗೆ 28,000 ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ದಾಖಲಾಗಿದ್ದು , 812 ಮಂದಿ ಮೃತಪಟ್ಟಿದ್ದಾರೆ . ದೇಶದಲ್ಲಿ ಅತಿ ಹೆಚ್ಚು ಕೊರೊನ ಪ್ರಕರಣಗಳೊಂದಿಗೆ ಈಗ ಮೂರನೆಯ ಸ್ಥಾನದಲ್ಲಿದೆ.