ಎಂ ಎಸ್ ಎಂ ಇ ಸೂಕ್ಷ್ಮ ಸಣ್ಣ ಮಧ್ಯಮ ಉದ್ಯಮಗಳಿಗೆ ಕೇಂದ್ರ ಸರ್ಕಾರದ ಕರೋನಾ ಪರಿಹಾರ ಯೋಜನೆಯಡಿ ಬ್ಯಾಂಕಿನಿಂದ ಸಿಗುವ ಸಾಲ ಸೌಲಭ್ಯಗಳ ಮಾಹಿತಿ ಕಾರ್ಯಗಾರ ಸುಳ್ಯ ಲಯನ್ಸ್ ಸೇವಾ ಸದನದಲ್ಲಿ ಇಂದುನಡೆಯಿತು. ಕಾರ್ಯಗಾರದ ನೇತೃತ್ವವನ್ನು ಎಂಬಿ ಫೌಂಡೇಶನ್ ಅಧ್ಯಕ್ಷ ಎಂಬಿ ಸದಾಶಿವ ವಹಿಸಿದ್ದರು. ಸುಳ್ಯ ಕಾರ್ಪೊರೇಷನ್ ಬ್ಯಾಂಕ್ ,ಬ್ಯಾಂಕ್ ಆಫ್ ಬರೋಡ, ಫೆಡರಲ್ ಬ್ಯಾಂಕ್, ಇದರ ವ್ಯವಸ್ಥಾಪಕರು ಸಭೆಯಲ್ಲಿ ಉಪಸ್ಥಿತರಿದ್ದ ವರ್ತಕರಿಗೆ ತಮ್ಮ ತಮ್ಮ ಬ್ಯಾಂಕುಗಳಿಂದ ಕೇಂದ್ರ ಸರ್ಕಾರದ ಯೋಜನೆ ಅಡಿಯಲ್ಲಿ ಸಿಗುವ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಿ ಭಾರತ ಲಾಕ್ಡೌನ್ ಹಿನ್ನೆಲೆಯಲ್ಲಿ ಹಲವಾರು ಉದ್ಯಮಿಗಳು , ವರ್ತಕರು ಗಳು ತಮ್ಮ ತಮ್ಮ ಸಂಸ್ಥೆಗಳನ್ನು ಬಂದ್ ಮಾಡಿ ಸಂಕಷ್ಟದಲ್ಲಿರುವವರಿಗೆ ಕೇಂದ್ರ ಸರ್ಕಾರವು ಈ ಮೊದಲು ಬ್ಯಾಂಕುಗಳಿಂದ ಸಾಲ ಪಡೆದು ಉತ್ತಮ ರೀತಿಯಲ್ಲಿ ಮರುಪಾವತಿ ಮಾಡಿ ಅವರ ಬಾಕಿ ಇರುವ ಸಾಲದ ಮೊತ್ತಕ್ಕೆ ಶೇಕಡ ಇಪ್ಪತ್ತರಂತೆ ಮರು ಸಾಲವನ್ನು ನೀಡುವ ಯೋಜನೆಯನ್ನು ಜಾರಿಗೆ ತಂದಿದೆ. ಇದರ ಅವಧಿಯು 4 ವರ್ಷಗಳ ಕಾಲ ಇರಲಿದ್ದು ಇದರ ಪ್ರಯೋಜನವನ್ನು ಪಡೆದುಕೊಳ್ಳಲು ವರ್ತಕರು ಯಾವುದೆಲ್ಲ ನೀತಿಯನ್ನು ಅನುಸರಿಸಬೇಕು ಎಂಬ ಮಾಹಿತಿಯನ್ನು ಈ ಕಾರ್ಯಗಾರದಲ್ಲಿ ನೀಡಲಾಯಿತು.
ಯೂನಿಯನ್ ಬ್ಯಾಂಕ್ (ಕೊರ್ಪೊರೇಷನ್ ) ವ್ಯವಸ್ಥಾಪಕ ಹರೀಶ್, ಫೆಡರಲ್ ಬ್ಯಾಂಕ್ ನ ವಿಮರ್ಶ, ಬ್ಯಾಂಕ್ of ಬರೋಡ ದಿಂದ ಭಾಗ್ಯಶ್ರೀ ಭಾಗವಹಿಸಿ ಮಾಹಿತಿ ನೀಡಿದರು. ಲಯನ್ಸ್ ಟ್ರಸ್ಟಿನ ಕಾರ್ಯದರ್ಶಿ ವೀರಪ್ಪ ಗೌಡ, ಲಯನ್ಸ್ ಕೋಶಾಧಿಕಾರಿ ತಮ್ಮಯ್ಯ, ಕಾರ್ಯದರ್ಶಿ ರಾಮಕೃಷ್ಣ ರೈ, ಸಾಮಾಜಿಕ ಕಾರ್ಯಕರ್ತ ಹಸೈನಾರ್ ವೇದಿಕೆಯಲ್ಲಿ ಇದ್ದರು
- Thursday
- November 21st, 2024