Ad Widget

ಅರಂತೋಡು ಮದುವೆಗೆ ಕೊರೊನ ಕಾಟ – 50 ಕ್ಕೂ ಅಧಿಕ ಮಂದಿಗೆ ಕಾರಂಟೈನ್ ಸಂಕಟ

ಅರಂತೋಡಿನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಪಾಲ್ಗೊಂಡ ಸುಮಾರು ಐವತ್ತಕ್ಕೂ ಅಧಿಕ ಮಂದಿಗೆ ಮುಂಜಾಗ್ರತಾ ಕ್ರಮವಾಗಿ ಹೋಂ ಕ್ವಾರಂಟೈನ್ ವಿಧಿಸಿರುವ ಘಟನೆ ನಡೆದಿದೆ.ಮಲೇಷ್ಯಾದಿಂದ ಬಂದು ಮಂಗಳೂರಿನಲ್ಲಿ ಹೋಟೆಲ್ ಕ್ವಾರಂಟೈನಲ್ಲಿದ್ದ ವೈಧ್ಯ ರಿಪೋರ್ಟ್ ಬರುವ ಮುನ್ನ ಅರಂತೋಡು ತನ್ನ ಸಂಬಂಧಿಕರ ಮನೆಗೆ ಬಂದಿದ್ದರು. ಅರಂತೋಡಿನಲ್ಲಿರುವ ವೇಳೆ ವರದಿ ಬಂದ ಹಿನ್ನಲೆಯಲ್ಲಿ ಮದುವೆ ಸಮಾರಂಭದಲ್ಲಿ ಭಾಗವಹಿಸಿದ ೫೨ಕ್ಕೂ ಅಧಿಕ ಮಂದಿಗೆ ಹೋಮ್ ಕ್ವಾರಂಟೈನಲ್ಲಿರಲು ಸೂಚಿಸಲಾಗಿದೆ.
ಮಲೇಷ್ಯಾದಲ್ಲಿದ್ದ ವೈದ್ಯ ತನ್ನ ಅರಂತೋಡು ಗ್ರಾಮದ ಸಂಬಂಧಿಕರ ಮನೆಗೆ ಮೇ 31ರಂದು ಬಂದಿದ್ದರು. ಬಳಿಕ ಆ ಮನೆಯ ಯಜಮಾನ ತನ್ನ ಕಾರಿನಲ್ಲಿ ನಾಲ್ಕು ಜನರೊಂದಿಗೆ ಮದುವೆ ಮನೆಯೊಂದಕ್ಕೆ ತೆರಳಿದ್ದರು. ವೈದ್ಯರಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದ ಹಿನ್ನೆಲೆಯಲ್ಲಿ ಎರಡು ಮನೆಯವರಿಗೆ ಹಾಗೂ ವೈದ್ಯ ಬೇಟಿ ನೀಡಿದ ಮನೆಗೆ ಮದುವೆ ತೆರಳಿದ್ದ ನಾಲ್ಕು ಮಂದಿಗೆ ಹೋಮ್ ಕ್ವಾರಂಟೈನ್‌ನಲ್ಲಿರಲು ಮೇ 31ರಂದು ಸೂಚಿಸಲಾಗಿತ್ತು.
ಐದು ಮಂದಿ ಮದುವೆಗೆ ಹೋಗಿದ್ದ ಸಮಯದಲ್ಲಿ ಮದುವೆ ಮನೆಯಲ್ಲಿದ್ದ ಎಲ್ಲರನ್ನು ಪತ್ತೆ ಹಚ್ಚಿ ವಿಳಾಸ ಕಂಡು ಹಿಡಿದು ಸುಮಾರು ೫೨ಕ್ಕೂ ಅಧಿಕ ಮಂದಿಗೆ ಜೂ ೧ ರಂದು ಹೋಮ್ ಕ್ವಾರಂಟೈನ್‌ಲ್ಲಿರಲು ಸೂಚಿಸಲಾಗಿದೆ ಎಂದು ಅರಂತೋಡು ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಜಯಪ್ರಕಾಶ್ ತಿಳಿಸಿದ್ದಾರೆ.

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!