
ಕರ್ನಾಟಕದಲ್ಲಿ ಕೊರೋನಾ ತಾಂಡವವಾಡುತ್ತಿದ್ದು, ಇತ್ತೀಚೆಗೆ ಪ್ರತಿದಿನ ಶತಕ ಬಾರಿಸುತ್ತಲೇ ಬರುತ್ತಿದೆ. ಯಾವಾಗ ಹೊರರಾಜ್ಯ, ದೇಶಗಳಿಂದ ಕರ್ನಾಟಕಕ್ಕೆ ಜನ ಬಂದರೋ ಅಗಲೇ ಕೊರೊನ ರುದ್ರ ನರ್ತನ ಆರಂಭಿಸಿದೆ. ಇಂದು ಕೃಷ್ಣ ನಗರಿ ಉಡುಪಿಯಲ್ಲಿ ಒಂದೇ ದಿನ ಬರೋಬ್ಬರಿ 210 ಪ್ರಕರಣಗಳು ಪತ್ತೆಯಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿಕೆ ನೀಡಿದ್ದಾರೆ . ಇದರಿಂದ ಉಡುಪಿ ಸೇರಿದಂತೆ ಕರಾವಳಿಯೇ ಭಯಬೀತರಾಗಿದ್ದಾರೆ. ಉಡುಪಿಗೆ ಬೇರೆ ರಾಜ್ಯ ಮತ್ತು ದೇಶದಿಂದ 2000 ಕ್ಕೂ ಹೆಚ್ಚು ಜನ ಬಂದಿದ್ದಾರೆ.